
ನಮ್ಮ ದಿನಚರಿ ಹೇಗೇ ಇದ್ದರು, ರಾತ್ರಿ ಮಲಗುವ ಮುನ್ನ ಒಂದೊಂದು ಬಾರಿ ಮನಸ್ಸಿಗೆ ಬರುವ ಆಲೋಚನೆ.. ಅದೆಷ್ಟು ಬಾರಿ ಆ ದಿನ ಖುಷಿಯಾಗಿದ್ದೆವು ಅಂತ. ನಾವು ಖುಷಿಯಾಗಿದ್ದೀವೋ ಇಲ್ಲವೊ ಎಂದು ನಮ್ಮನ್ನು ನಾವೆ ಪರೀಕ್ಷಿಸಿಕೊಳ್ಳುವಂತಹ ಒಂದು ಅನುಭವ. ನಿರಾಸೆ ತುಂಬಿದ ಜೀವನದಲ್ಲಿ ಇಂತಹ ಒಂದು ಯೋಚನೆ-ಪರೀಕ್ಷೆ ಇರಲೇ ಬೇಕೆನಿಸುತ್ತೆ. ನನ್ನ ಬಾಳಿನಲ್ಲಿ ಖುಷಿ ತುಂಬಿದೆಯೆ? ಎಂದು ಯೋಚಿಸಿದವ ಆ ದಿನ ಪೂರ ಯಾರೊಂದಿಗು ಮಾತಾಡಲಾರ. ಆದರೆ ಯೋಚಿಸಬೇಕಾದ ವಿಷಯವೇನೆಂದರೆ... ಎಷ್ಟೋ ಬಾರಿ ಇಂತಹ ಕ್ಷಣಗಲು ನಮ್ಮೆದುರು ಹಾದು ಹೊಗುತ್ತವೆ... ಅದನ್ನು ಅನುಭವಿಸಬೇಕು ಎಂದರೆ - ಅದು ಆ ಕ್ಷಣ ನಮ್ಮದಾಗುತ್ತೆ... ನಿರ್ಧರಿಸುವುದು ನಮ್ಮ ಕೈಯ್ಯಲ್ಲೆ ಇದೆ. ಇಂತಹ ಅವಕಾಶಗಳು ಬಂದು ಹೋಗುತ್ತಲೆ ಇರುತ್ತೆ. ಒಮ್ಮೆ ಅಮ್ಮ, ಅಪ್ಪ, ಅಣ್ಣ, ತಮ್ಮ, ಅಕ್ಕ, ತಂಗಿ ರೂಪದಲ್ಲಿ ಬಂದರೆ... ಒಮ್ಮೆ ಸ್ನೇಹಿತ, ಸ್ನೇಹಿತೆಯರ ರೂಪದಲ್ಲಿ ಬರುತ್ತೆ. ಕಾಲವೆ ಸಾಕ್ಷಿ, ಇದುವರೆಗು ಏಕಾಂತದಲ್ಲಿ ಯಾರು ಖುಷಿ ಕಂಡವರಿಲ್ಲ. ಮನುಷ್ಯ ಏಕಾಂತಿಯಾಗಿರುವುದು ಪ್ರಕೃತಿಯ ನಿಯಮವಲ್ಲ, ಅವನೇ ಮಾಡಿಕೊಂಡದ್ದು!
No comments:
Post a Comment