Wednesday, July 1, 2009

ಹನಿ ಹನಿ!

ನನಸಾಗದ ಕನಸುಗಳ ಬಡಿದೆಬ್ಬಿಸಿ
ಸೆಣಸಾಡಿ ನನಸಾಗಿಸುವುದೇ ನಿಜ ಜೀವನ!



ನಾ ಬಯಸಿದ್ದು ಪ್ರೀತಿ..
ಆಕೆ ನೀಡಿದ್ದು ಪ್ರೀತಿಯೇ;
ಆದರೆ ನನಗಲ್ಲ!


ದಿನವೆಲ್ಲಾ ಅವಳ ನೆನಪುಗಳೇ ಕಾಡಿತ್ತು..
ನಾ ತಂದ ಹೂ ಆಗಲೇ ಬಾಡಿತ್ತು..


ನಾ ನಿನ್ನ ಪ್ರೀತಿಸಿದ್ದು ಸುಳ್ಳಲ್ಲ ...
ನೀ ನನ್ನ ಪ್ರೀತಿಸಿದ್ದು ನಿಜವಲ್ಲ...


ನಿನ್ನ ಮರೆತದ್ದು ನಿಜವೇ ...
ಆದರೆ ನಿನ್ನ ನೆನಪುಗಳನ್ನಲ್ಲ...


ಪ್ರೀತಿ:
ಎರಡು ದೇಹಗಳು
ಮಣ್ಣಾದ ಮೇಲೂ,
ಎರಡೂ ಹೃದಯಗಳಿಂದ
ಕೇಳಿಬರುವ ಮಿಡಿತ.

Thursday, November 6, 2008

ನನ್ನ ಪ್ರೀತಿಯ ಗೆಳತಿ









ಚಿಕ್ಕಿಯೊಂದು ಜಾರಿ ಬಂದು
ಇವಳ ಮಡಿಲ ಸೇರಿತಂತೆ
ಮಡಿಲ ಸೇರಿ ಮಮತೆ ನೋಡಿ
ಮಡಿಲಿನಲ್ಲೆ ಉಳಿಯಿತಂತೆ
ಚಂದ್ರ ಒಮ್ಮೆ ಇವಳ ನೋಡಿ
ನಾಚಿ ನಾಚಿಕೊಂಡನಂತೆ
ಇವಳ ನಗುವ ಮತ್ತೆ ನೋಡಿ
ಎಲ್ಲ ನಗುವ ಬಾಚಿಕೊಂಡನಂತೆ..
ಹಕ್ಕಿಯೊಂದು ಹಾಡುತಿತ್ತು
ತನ್ನ ರಾಗದಲ್ಲಿ ತಾನು
ಹಕ್ಕಿ ರಾಗದಲ್ಲಿ ಇದ್ದ
ಚೆಲುವ ಚಿತ್ತಾರವಲ್ಲವೆ ನೀನು..
ಬಿರುಗಾಳಿಯಾಗಿ ಬಂದು ತಂಗಾಳಿಯಾಗಿ ಸೋಕಿ
ಮನದಂಗಳದ ಹೂಗಳನು ನಗಿಸಿದೆ
ಅದು ಹೇಗೆಂದು ನಾ ಅರಿಯೆ ಗೆಳತಿ
ಸ್ನೇಹದ ಬೆಸುಗೆ ನೀ ಬೆಸೆದೆ
ಈ ಗೆಳೆತನ ಇರಲಿ ಕೊನೆತನಕ
ಇಲ್ಲವಾದಲ್ಲಿ ನೋವು ಖಚಿತ
ಸ್ನೇಹವೆಂದರೇನೆಂದು ಅರಿಯಲೆಲ್ಲರು
ಸ್ನೇಹ ತುಂಬಿದ ಲೋಕ ಅನವರಥ
ಇರದಿರಲಿ ನಮ್ಮ ಪ್ರೀತಿಯಲ್ಲಿ ಕಲಹ
ಎಂದೆಂದಿಗು ಇರಲಿ ಈ ನಮ್ಮ ಸ್ನೇಹ......

A Friend that you are!


It was just another day
And it was all blue
I bumped into a beautiful soul
Of which i had no clue

Not in my dreams i had thought
I'd come across someone like this
A person who is so good
But with a different twist

They say that the first impression is the best
But it was so different in this case
The more you try to know this person
You find yourself in a maze

A soul so good by heart
But just so hard to deal
No matter how your thoughts flow
You can never tell how you feel

No more can i describe this person
Who is now my good friend
And i pray to god always
That this friendship has no end !!

Wednesday, February 27, 2008

ಏನೆಂದು ಕರೆಯಲಿ ನಿನ್ನ...














ಬೇಡದ ನೆನಪುಗಳನ್ನೆ
ಹೊದ್ದು ಮಲಗಿರುವಾಗ
ಹೇಳು ಹೇಗೆ ನೆನೆಯಲಿ ನಿನ್ನ?
ಪ್ರೀತಿಯ ದೀಪ ಹಚ್ಚಿದವನೆಂದ
ಬೆಳಗುವ ದೀಪವ ಆರಿಸಿದವನೆಂದ...!!!

ನೀ ಹೋದ ದಾರಿಯಲಿ
ಕಣ್ಣಿಟ್ಟು ಕಾದೆ
ಕಾಲು ಸೋಲಲಿಲ್ಲ
ಕಣ್ಣೂ ನೋಯಲಿಲ್ಲ
ಕೇವಲ ಕಾಲ ಸತ್ತು ಮಲಗಿತು...

ಬದುಕುತಿದ್ದೆನೋ ಏನೊ
ನಿನ್ನ ಮಧುರ ಕನಸ ನೆನಪಿನಲ್ಲಿ
ಮೊದಲೇ ಸೋತ ಕಂಗಳು ನನ್ನವು
ನೀನು ಕಣ್ಣುಗಳಿಗೆ ಬಣ್ಣ ತುಂಬಲಿಲ್ಲ
ಬದಲಾಗಿ ಕೇವಲ ಮಣ್ಣು ತುಂಬಿದೆ...

ನನ್ನ ಅಷ್ಟೂ ಕನಸುಗಳಿಗೆ
ಘೋರಿ ಕಟ್ಟಿದ ನಿನಗೆ ಒಂದು
ಹೆಸರಿಡಬೇಕು ನಾನು.
ಒಲವ ಕೊಂದ ಕೊಲೆಗಾರನೆಂದ?
ನಗುವ ನನ್ನ ಕಣ್ಣುಗಳಿಗೆ
ಅಳುವ ಪಾಠ ಕಲಿಸಿದ ಕಲೆಗಾರನೆಂದ?

ಗೆಳತಿ ಶೈಲ ಬರೆದದ್ದು....

Tuesday, February 19, 2008

Mixed Emotions


Sometimes its easy to get lost in this world
I'll find my way somehow someday
But now, am living by the second
No one is gonna hold me back
Not now, not ever.....

Looking back into my past I realize
I had seen the worst coming my way
But its way too late now
Its left me with no words to say
Not now, not ever.....

Seems like the worst is yet to come
It would find its way anyways
But no matter how bad it gets
It sure cant darken my sunny days
Not now, not ever....

My angels have shred their wings
And have lost the heavens keys
Guess i'll have to teach 'em again
The lessons of love and peace
But am afraid if they will ever do so
May be they wouldn't and just say
Not now, not ever...

ಖುಷಿ - ಖುಷಿ ತುಂಬಿದ ಕ್ಷಣಗಳು...



ನಮ್ಮ ದಿನಚರಿ ಹೇಗೇ ಇದ್ದರು, ರಾತ್ರಿ ಮಲಗುವ ಮುನ್ನ ಒಂದೊಂದು ಬಾರಿ ಮನಸ್ಸಿಗೆ ಬರುವ ಆಲೋಚನೆ.. ಅದೆಷ್ಟು ಬಾರಿ ಆ ದಿನ ಖುಷಿಯಾಗಿದ್ದೆವು ಅಂತ. ನಾವು ಖುಷಿಯಾಗಿದ್ದೀವೋ ಇಲ್ಲವೊ ಎಂದು ನಮ್ಮನ್ನು ನಾವೆ ಪರೀಕ್ಷಿಸಿಕೊಳ್ಳುವಂತಹ ಒಂದು ಅನುಭವ. ನಿರಾಸೆ ತುಂಬಿದ ಜೀವನದಲ್ಲಿ ಇಂತಹ ಒಂದು ಯೋಚನೆ-ಪರೀಕ್ಷೆ ಇರಲೇ ಬೇಕೆನಿಸುತ್ತೆ. ನನ್ನ ಬಾಳಿನಲ್ಲಿ ಖುಷಿ ತುಂಬಿದೆಯೆ? ಎಂದು ಯೋಚಿಸಿದವ ಆ ದಿನ ಪೂರ ಯಾರೊಂದಿಗು ಮಾತಾಡಲಾರ. ಆದರೆ ಯೋಚಿಸಬೇಕಾದ ವಿಷಯವೇನೆಂದರೆ... ಎಷ್ಟೋ ಬಾರಿ ಇಂತಹ ಕ್ಷಣಗಲು ನಮ್ಮೆದುರು ಹಾದು ಹೊಗುತ್ತವೆ... ಅದನ್ನು ಅನುಭವಿಸಬೇಕು ಎಂದರೆ - ಅದು ಆ ಕ್ಷಣ ನಮ್ಮದಾಗುತ್ತೆ... ನಿರ್ಧರಿಸುವುದು ನಮ್ಮ ಕೈಯ್ಯಲ್ಲೆ ಇದೆ. ಇಂತಹ ಅವಕಾಶಗಳು ಬಂದು ಹೋಗುತ್ತಲೆ ಇರುತ್ತೆ. ಒಮ್ಮೆ ಅಮ್ಮ, ಅಪ್ಪ, ಅಣ್ಣ, ತಮ್ಮ, ಅಕ್ಕ, ತಂಗಿ ರೂಪದಲ್ಲಿ ಬಂದರೆ... ಒಮ್ಮೆ ಸ್ನೇಹಿತ, ಸ್ನೇಹಿತೆಯರ ರೂಪದಲ್ಲಿ ಬರುತ್ತೆ. ಕಾಲವೆ ಸಾಕ್ಷಿ, ಇದುವರೆಗು ಏಕಾಂತದಲ್ಲಿ ಯಾರು ಖುಷಿ ಕಂಡವರಿಲ್ಲ. ಮನುಷ್ಯ ಏಕಾಂತಿಯಾಗಿರುವುದು ಪ್ರಕೃತಿಯ ನಿಯಮವಲ್ಲ, ಅವನೇ ಮಾಡಿಕೊಂಡದ್ದು!

ಇಂತಿ ನಿನ್ನ, ನತದೃಷ್ಟ


ಆರಾಧ್ಯ ದೇವತೆ,

ಅಂದು ನೀ ಬರೆದ ಪತ್ರ ಸೊಗಸಾಗಿತ್ತು ಕಣೆ. ಒಂದೊಂದು ಪದಗಳು ನಿನ್ನ ಭಾವನೆಗಳ ಕೂಗಿ ಕೂಗಿ ಹೇಳುವಂತಿತ್ತು. ಅದು ಪ್ರೇಮ ಪತ್ರವಲ್ಲ, ನನಗೆ ಗೊತ್ತು. ಏನು ಮಾಡಲೇ... ಹುಚ್ಚು ಹೃದಯ.. ಕೇಳಬೆಕಲ್ಲ... ನೀನೆ ಬೇಕಂತೆ! ಹಾಲಿಗಾಗಿ ಮಗುವು ಅಮ್ಮನ ಗೋಳಿಟ್ಟ ಪರಿ... ಇಲ್ಲವೆಂದು ಹೇಗೆ ಹೇಳಲೆ? ಮನಸ್ಸಲ್ಲಷ್ಟೆ ನಿನ್ನ ಇಟ್ಟಿದ್ದರೆ... ಮುರಿದರೋಯಿತು ಎಂದು ಸುಮ್ಮನಾಗಬಹುದಿತ್ತು. ಆದರೆ ನನ್ನ ಕಣ ಕಣಗಳಲ್ಲು ನೀನೆ ತುಂಬಿರುವೆ, ಏನು ಮಾಡಲಿ? ನಿನ್ನ ಬಿಟ್ಟು ಇನ್ನೊಬ್ಬರ ಬಗ್ಗೆ ಯೋಚಿಸಿದ್ದಿಲ್ಲ... ಅದನ್ನೆಲ್ಲ ಹೇಗೆ ನಶಿಸಲಿ??? ನನಗೆ ಗೊತ್ತು ನಿನಗೆ ಅವನ ಕಂಡರೆ ತುಂಬಾ ಪ್ರೀತಿ ಅಂತ. ಯಾವ ಜನುಮದಲ್ಲಿ ಏನು ಕೇಡು ಮಾಡಿದ್ದೆನೋ... ಈ ಜನುಮದಲ್ಲಿ ನಾ ಪ್ರೀತಿ ಸಿಗದ ಪಾಪಿ !! ಇಲ್ಲಿಯವರೆಗು ಒಂದು ಬಾರಿಯೂ ನನ್ನ ನೋಯಿಸದ ನೀನು, ಇಂದು ಆರಲಾಗದ ಗಾಯ ಕೊಟ್ಟು ಹೋದೆ. ನಿನ್ನ ಇಷ್ಟ ಪಟ್ಟಿದ್ದು ತಪ್ಪೇ ಇರಬಹುದು, ಆದರೆ ಇಂತ ಶಿಕ್ಷೆ ತರವೆ??? ಎಲ್ಲೋ ಕೇಳಿದ್ದೆ... ಒಂದು ಕ್ರೂರ ಕೊಲೆಗಾರಿನಿಗು ಮನಸ್ಸು, ಮನಸ್ಸಾಕ್ಷಿ ಇರುತ್ತೆ ಅಂತ... ನಿನಗಿಲ್ಲವಾಯಿತೆ?? ನಿಜವಾಗಿಯು ದೇವರು ಅಂತ ಒಬ್ಬನಿದ್ದರೆ ಕೇಳದೆ ಬಿಡೋಲ್ಲ... ಯಾವ ಜನ್ಮದ ಪಾಪದ ಪ್ರತಿಫಲ ಇದು ಅಂತ. ಪೂಜೆಗಾಗೇ ತಂದ ಹೂಗಳ, ಕಾಲಡಿ ಹಾಕಿ ಹೊಸುಕಿದ ಹಾಗಿತ್ತು. ಪ್ರೀತಿಸುವುದು ತಪ್ಪೇ ಆದರೆ, ಈ ಶಿಕ್ಷೆ ನನಗೊಪ್ಪಿಗೆ. ಬೇರೇನು ಹೇಳುವಷ್ಟು ಸಹನೆಯಿಲ್ಲ... ನೀ ಎಲ್ಲಾದರು ಇರು, ಸುಖವಾಗಿರು. ಒಂದು ಮಾತ್ರ ನಿಜ.... ನಿನ್ನ ನೆನಪು ನನ್ನಿಂದ ದೂರವಾಗೋದು ನನ್ನ ಉಸಿರು ನನ್ನಿಂದ ದೂರವಾದಾಗಲೆ.

ಇಂತಿ
,
ನತದೃಷ್ಟ