Tuesday, February 19, 2008

ಇಂತಿ ನಿನ್ನ, ನತದೃಷ್ಟ


ಆರಾಧ್ಯ ದೇವತೆ,

ಅಂದು ನೀ ಬರೆದ ಪತ್ರ ಸೊಗಸಾಗಿತ್ತು ಕಣೆ. ಒಂದೊಂದು ಪದಗಳು ನಿನ್ನ ಭಾವನೆಗಳ ಕೂಗಿ ಕೂಗಿ ಹೇಳುವಂತಿತ್ತು. ಅದು ಪ್ರೇಮ ಪತ್ರವಲ್ಲ, ನನಗೆ ಗೊತ್ತು. ಏನು ಮಾಡಲೇ... ಹುಚ್ಚು ಹೃದಯ.. ಕೇಳಬೆಕಲ್ಲ... ನೀನೆ ಬೇಕಂತೆ! ಹಾಲಿಗಾಗಿ ಮಗುವು ಅಮ್ಮನ ಗೋಳಿಟ್ಟ ಪರಿ... ಇಲ್ಲವೆಂದು ಹೇಗೆ ಹೇಳಲೆ? ಮನಸ್ಸಲ್ಲಷ್ಟೆ ನಿನ್ನ ಇಟ್ಟಿದ್ದರೆ... ಮುರಿದರೋಯಿತು ಎಂದು ಸುಮ್ಮನಾಗಬಹುದಿತ್ತು. ಆದರೆ ನನ್ನ ಕಣ ಕಣಗಳಲ್ಲು ನೀನೆ ತುಂಬಿರುವೆ, ಏನು ಮಾಡಲಿ? ನಿನ್ನ ಬಿಟ್ಟು ಇನ್ನೊಬ್ಬರ ಬಗ್ಗೆ ಯೋಚಿಸಿದ್ದಿಲ್ಲ... ಅದನ್ನೆಲ್ಲ ಹೇಗೆ ನಶಿಸಲಿ??? ನನಗೆ ಗೊತ್ತು ನಿನಗೆ ಅವನ ಕಂಡರೆ ತುಂಬಾ ಪ್ರೀತಿ ಅಂತ. ಯಾವ ಜನುಮದಲ್ಲಿ ಏನು ಕೇಡು ಮಾಡಿದ್ದೆನೋ... ಈ ಜನುಮದಲ್ಲಿ ನಾ ಪ್ರೀತಿ ಸಿಗದ ಪಾಪಿ !! ಇಲ್ಲಿಯವರೆಗು ಒಂದು ಬಾರಿಯೂ ನನ್ನ ನೋಯಿಸದ ನೀನು, ಇಂದು ಆರಲಾಗದ ಗಾಯ ಕೊಟ್ಟು ಹೋದೆ. ನಿನ್ನ ಇಷ್ಟ ಪಟ್ಟಿದ್ದು ತಪ್ಪೇ ಇರಬಹುದು, ಆದರೆ ಇಂತ ಶಿಕ್ಷೆ ತರವೆ??? ಎಲ್ಲೋ ಕೇಳಿದ್ದೆ... ಒಂದು ಕ್ರೂರ ಕೊಲೆಗಾರಿನಿಗು ಮನಸ್ಸು, ಮನಸ್ಸಾಕ್ಷಿ ಇರುತ್ತೆ ಅಂತ... ನಿನಗಿಲ್ಲವಾಯಿತೆ?? ನಿಜವಾಗಿಯು ದೇವರು ಅಂತ ಒಬ್ಬನಿದ್ದರೆ ಕೇಳದೆ ಬಿಡೋಲ್ಲ... ಯಾವ ಜನ್ಮದ ಪಾಪದ ಪ್ರತಿಫಲ ಇದು ಅಂತ. ಪೂಜೆಗಾಗೇ ತಂದ ಹೂಗಳ, ಕಾಲಡಿ ಹಾಕಿ ಹೊಸುಕಿದ ಹಾಗಿತ್ತು. ಪ್ರೀತಿಸುವುದು ತಪ್ಪೇ ಆದರೆ, ಈ ಶಿಕ್ಷೆ ನನಗೊಪ್ಪಿಗೆ. ಬೇರೇನು ಹೇಳುವಷ್ಟು ಸಹನೆಯಿಲ್ಲ... ನೀ ಎಲ್ಲಾದರು ಇರು, ಸುಖವಾಗಿರು. ಒಂದು ಮಾತ್ರ ನಿಜ.... ನಿನ್ನ ನೆನಪು ನನ್ನಿಂದ ದೂರವಾಗೋದು ನನ್ನ ಉಸಿರು ನನ್ನಿಂದ ದೂರವಾದಾಗಲೆ.

ಇಂತಿ
,
ನತದೃಷ್ಟ

2 comments:

Unknown said...

its just amazing raganna

Unknown said...

awesome!! idu naan modle odidhini aadare with this pic its just amazing with true feelings!