
ಬೇಡದ ನೆನಪುಗಳನ್ನೆ
ಹೊದ್ದು ಮಲಗಿರುವಾಗ
ಹೇಳು ಹೇಗೆ ನೆನೆಯಲಿ ನಿನ್ನ?
ಪ್ರೀತಿಯ ದೀಪ ಹಚ್ಚಿದವನೆಂದ
ಬೆಳಗುವ ದೀಪವ ಆರಿಸಿದವನೆಂದ...!!!
ನೀ ಹೋದ ದಾರಿಯಲಿ
ಕಣ್ಣಿಟ್ಟು ಕಾದೆ
ಕಾಲು ಸೋಲಲಿಲ್ಲ
ಕಣ್ಣೂ ನೋಯಲಿಲ್ಲ
ಕೇವಲ ಕಾಲ ಸತ್ತು ಮಲಗಿತು...
ಬದುಕುತಿದ್ದೆನೋ ಏನೊ
ನಿನ್ನ ಮಧುರ ಕನಸ ನೆನಪಿನಲ್ಲಿ
ಮೊದಲೇ ಸೋತ ಕಂಗಳು ನನ್ನವು
ನೀನು ಕಣ್ಣುಗಳಿಗೆ ಬಣ್ಣ ತುಂಬಲಿಲ್ಲ
ಬದಲಾಗಿ ಕೇವಲ ಮಣ್ಣು ತುಂಬಿದೆ...
ನನ್ನ ಅಷ್ಟೂ ಕನಸುಗಳಿಗೆ
ಘೋರಿ ಕಟ್ಟಿದ ನಿನಗೆ ಒಂದು
ಹೆಸರಿಡಬೇಕು ನಾನು.
ಒಲವ ಕೊಂದ ಕೊಲೆಗಾರನೆಂದ?
ನಗುವ ನನ್ನ ಕಣ್ಣುಗಳಿಗೆ
ಅಳುವ ಪಾಠ ಕಲಿಸಿದ ಕಲೆಗಾರನೆಂದ?
ಗೆಳತಿ ಶೈಲ ಬರೆದದ್ದು....
3 comments:
kone salugalu touching.... tumba chennagidhe. shyla great write up...
tumba chennagide.. bravo!!!!!!!
Thanks Reshma :-)
Post a Comment