
ಇವಳ ಮಡಿಲ ಸೇರಿತಂತೆ
ಮಡಿಲ ಸೇರಿ ಮಮತೆ ನೋಡಿ
ಮಡಿಲಿನಲ್ಲೆ ಉಳಿಯಿತಂತೆ
ಚಂದ್ರ ಒಮ್ಮೆ ಇವಳ ನೋಡಿ
ನಾಚಿ ನಾಚಿಕೊಂಡನಂತೆ
ಇವಳ ನಗುವ ಮತ್ತೆ ನೋಡಿ
ಎಲ್ಲ ನಗುವ ಬಾಚಿಕೊಂಡನಂತೆ..
ಹಕ್ಕಿಯೊಂದು ಹಾಡುತಿತ್ತು
ತನ್ನ ರಾಗದಲ್ಲಿ ತಾನು
ಹಕ್ಕಿ ರಾಗದಲ್ಲಿ ಇದ್ದ
ಚೆಲುವ ಚಿತ್ತಾರವಲ್ಲವೆ ನೀನು..
ಬಿರುಗಾಳಿಯಾಗಿ ಬಂದು ತಂಗಾಳಿಯಾಗಿ ಸೋಕಿ
ಮನದಂಗಳದ ಹೂಗಳನು ನಗಿಸಿದೆ
ಅದು ಹೇಗೆಂದು ನಾ ಅರಿಯೆ ಗೆಳತಿ
ಸ್ನೇಹದ ಬೆಸುಗೆ ನೀ ಬೆಸೆದೆ
ಈ ಗೆಳೆತನ ಇರಲಿ ಕೊನೆತನಕ
ಇಲ್ಲವಾದಲ್ಲಿ ನೋವು ಖಚಿತ
ಸ್ನೇಹವೆಂದರೇನೆಂದು ಅರಿಯಲೆಲ್ಲರು
ಸ್ನೇಹ ತುಂಬಿದ ಲೋಕ ಅನವರಥ
ಇರದಿರಲಿ ನಮ್ಮ ಪ್ರೀತಿಯಲ್ಲಿ ಕಲಹ
ಎಂದೆಂದಿಗು ಇರಲಿ ಈ ನಮ್ಮ ಸ್ನೇಹ......
3 comments:
:), very pretty, ಪ್ರಕೃತಿಯೇ ಭಾಷೆಯಾಗಿ ಹೊರಹೊಮ್ಮಿದೆ ಅನ್ಸುತ್ತೆ , ಕವನ ತಾರೆ, ಚಂದಮ, ಹಕ್ಕಿ ಹೀಗೆ ಹಲವು ಮಜಲುಗಳಲ್ಲಿ ವಿಸ್ತಾರಗೊಳ್ಳುತಾ ಸಾಗಿದೆ ಅನ್ನಿಸ್ತು ಎಲ್ಲದಕ್ಕಿಂತ ಮುಖ್ಯವಾಗಿ ಸಂಬಂಧಗಳ purity ಎದ್ದು ಕಾಣಿಸ್ತು dats very much important I believe
Thank you :-)
ನಮಸ್ತೆ.. ನಾಡಿದ್ದು 8-03-2009 ರಂದು ನಡೆಯುವ ಅಮ್ಮನ ಹಬ್ಬಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ. ನೀವು ಬಂದರೆ ತುಂಬಾ ಸಂತೋಷ ಆಗುತ್ತೆ.
ಶುಭವಾಗಲಿ,
- ಶಮ, ನಂದಿಬೆಟ್ಟ
Post a Comment